Thursday, July 10, 2008

ನೆನಪು

ನಿನ್ನಲ್ಲಿ ಹರಿಯುತ್ತ ನಾ ಇಂದು ನೆಂದಿರುವೆ
ಕಣ್ಣಿಂದ ಸಾಗುತ್ತ ಮನವನ್ನು ತುಂಬಿರುವಿ
ನಿನ್ನಲ್ಲಿ ಈಜುತ್ತಾ ಜಗವನ್ನೆ ಮರೆತಾಗ
ಕೊನೆಬಂತು ಯಂಬಂತೆ ದಡವನ್ನೇ ತೋರಿಸುವಿ
ನೀ ಮರಳಿ ಬರಲಾರೆ ಎಂದರಿವು ಮೂಡಿಸುತ
ಕಣ್ಣೀರ ಹೊಳೆಯಲ್ಲಿ ಈ ಮನವ ಮುಳುಗಿಸುತ
ಮಜದಲ್ಲಿ ಮರೆತಿರುವೆಯೋ ಹೇ ನೆನಪು !!

Wednesday, July 9, 2008

ಛಲವಿದ್ದವನ ಬಲ

ಹನಿಯಿಂದ ಶುರುವಾಗಿ
ಹೊಳೆಯಾಗಿ ಬದಲಾಗಿ
ಕೊನೆಗೊಂದು ಮಹಾಸಗರವಾಗಿ
ಗುರಿಯನ್ನು ಬೆನ್ನ್ಹತ್ತಿ
ಛಲದಿಂದ ಸಾಗುವನ
ಹಿಡಿದಾವೆ ಅಂಬರದ ನಕ್ಷತ್ರವು?!!

ಕೊಟ್ತ್ಯಾನು ಪುಷ್ಪಗಳ ಅಲಿದಾಡಿದಾ ಜೇನು
ಕೂಡಿಟ್ಟ ಒಂದು ಹನಿ ಮಕರಂದದಿ
ಕಟ್ಟುವುದು ಗೂಡಿಂದ ಜೇನುಗೂಡು
ಶ್ರಮವನ್ನು ಮನೆಮಾಡಿ
ಪಣವನ್ನು ಬಿಡದವನ
ಯಶವನ್ನು ಹುಸಿಯಾಗಿ ಮಾಡುವಿರಾ?!!

ತಿಳಿಯಾಗಿ ಮಾತುಗಳ ಸಾರುತ್ತ ಬಂದಿರುವೆ
ತಿಳಿಯದೆ ಹೋಗದಿರು ಹೇ ಮನವಾ
ಭಯವನ್ನು ಕಂಡಾಗ ಧೃತಿಯನ್ನು ಕೆಡದಿರು
ಕಷ್ಟಗಳು ಒದಗಿದರೆ ಹಿಂತಿರುಗಿ ನೋಡದಿರು
ಶನಿಯಾದಿ ಗ್ರಹಗಳು ಅಪಶಕುನವ ನುಡಿಯಲು
ಕಿಂಚಿತ್ತಾದರೂ ಕುಂದುವುದೇ ಛಲವಿದ್ದವನ ಬಲ?!!